TED Talks with Kannada transcript

ಶುಭೇಂದು ಶರ್ಮಾ: ನಿಮ್ಮ ಹಿತ್ತಲಿನಲ್ಲಿ ಅರಣ್ಯವನ್ನು ಹೇಗೆ ಬೆಳೆಯುವುದು?

TED@BCG Paris

ಶುಭೇಂದು ಶರ್ಮಾ: ನಿಮ್ಮ ಹಿತ್ತಲಿನಲ್ಲಿ ಅರಣ್ಯವನ್ನು ಹೇಗೆ ಬೆಳೆಯುವುದು?
2,525,103 views

ಅರಣ್ಯಗಳು ಮಾನವ ಜೀವನದಿಂದ ಏಕಾಂತವಾಗಿ ದೂರದ ಗುಡ್ಡಗಾಡಗಿರುವುದು ಬೇಕಾಗಿಲ್ಲ. ಬದಲಾಗಿ, ನಾವು ಅವುಗಳನ್ನು ನಾವು ಇರೋ ಕಡೆಯೆ ಬೆಳೆಯಬಹುದು - ನಗರಗಳಲ್ಲಿ ಸಹ. ಪರಿಸರ ಉದ್ಯಮಿ ಮತ್ತು ಟೆಡ್ ಫೆಲೋ ಶುಭೇಂದು ಶರ್ಮ ಅತಿ ಗಾಢವಾದ,ಜೈವಿಕ ವೈವಿಧ್ಯಮಯವಾದ ಸಣ್ಣ ಸ್ಥಳೀಯ ಜಾತಿಗಳ ಅರಣ್ಯಗಳನ್ನು - ನಗರ ಪ್ರದೇಶಗಳಲ್ಲಿ ಬೆಳೆಯಲು, ಮಣ್ಣಿನ ಎಂಜಿನಿಯರಿಂಗ್, ಸೂಕ್ಷ್ಮಾಣು ಜೀವಿಗಳ ಮತ್ತು ಜೀವರಾಶಿ ಮೂಲಕ ನೈಸರ್ಗಿಕ ಬೆಳವಣಿಗೆ ಪ್ರಕ್ರಿಯೆ ಶುರುಮಾಡಿದರು. ಅವರು ಕೇವಲ ೧೦ ವರ್ಷಗಳಲ್ಲಿ ೧೦೦ ವರ್ಷದ ಅರಣ್ಯ ಹೇಗೆ ಬೆಳೆಯುವುದೆಂದು ವಿವರಿಸುವುದನ್ನು ಕೇಳಿ, ನೀವು ಕೂಡ ಈ ಪುಟ್ಟ ಕಾಡಿನ ವಿನೋಧ ಕೂಟದಲ್ಲಿ ಹೇಗೆ ಸೇರುವುಬಹುದು ಎಂದು ತಿಳಿಯಿರಿ.

ಯಾಂಗ್ ಲಾನ್: ಚೈನಾವನ್ನು ಬದಲಾಯಿಸುತ್ತಿರುವ ಯುವಜನಾಂಗ

TEDGlobal 2011

ಯಾಂಗ್ ಲಾನ್: ಚೈನಾವನ್ನು ಬದಲಾಯಿಸುತ್ತಿರುವ ಯುವಜನಾಂಗ
2,042,453 views

ಯಂಗ್ ಲಾನ್ ಮೂಲತಃ ಪತ್ರಕರ್ತೆಯಾದ ಈಕೆ , "ಚೈನಾದ ಒಪ್ರಾ" ಎಂದೇ ಖ್ಯಾತಿ. ಚೈನಾದ ಯುವ ಪೀಳಿಗೆಯು ಅಂತರ್ಜಾಲದ ಮೂಲಕ ಅನ್ಯಾಯವನ್ನು ಪ್ರತಿಭಾತಿಸುತ್ತಿರುವುದರ ಬಗ್ಗೆ ಮಾತಾಡಿದ್ದಾರೆ.

ಜೂಲಿಯನ್ ಟ್ರೀಶರ್: ೮ ಹೆಜ್ಜೆಗಳು - ಧ್ವನಿ ಆರೋಗ್ಯದೆಡೆಗೆ

TEDGlobal 2010

ಜೂಲಿಯನ್ ಟ್ರೀಶರ್: ೮ ಹೆಜ್ಜೆಗಳು - ಧ್ವನಿ ಆರೋಗ್ಯದೆಡೆಗೆ
1,675,552 views

ಜೂಲಿಯನ್ ಟ್ರೆಷರ್ ನಮ್ಮ ಹೆಚ್ಚುತ್ತಿರುವ ಗದ್ದಲ ಪ್ರಪಂಚವು ನಮ್ಮ ಮಾನಸಿಕ ಆರೋಗ್ಯಕ್ಕೆ ಹಾನಿ ಮಾಡುತ್ತಿದೆ, ಸಾವಿಗೂ ಕಾರಣವಾಗುತ್ತಿದೆ ಎಂದು ಹೇಳುತ್ತಾರೆ. ಅವರು ಈ ಸೋಂಕಿನ ಆಕ್ರಮಣವನ್ನು ಮೃದುಗೊಳಿಸಲು 8-ಹಂತದ ಯೋಜನೆಯನ್ನು ಪ್ರಸ್ತುತಪಡಿಸಿ ಧ್ವನಿಯೊಂದಿಗಿನ ನಮ್ಮ ಸಂಬಂಧವನ್ನು ಮರುಸ್ಥಾಪಿಸುತ್ತಾರೆ.

ಸರ್ ಕೆನ್ ರಾಬಿನ್ಸನ್ : ಕಲಿಕಾ ಕ್ರಾಂತಿಯನ್ನು ತನ್ನಿ

TED2010

ಸರ್ ಕೆನ್ ರಾಬಿನ್ಸನ್ : ಕಲಿಕಾ ಕ್ರಾಂತಿಯನ್ನು ತನ್ನಿ
9,209,583 views

ಇದು ಈಗಾಗಲೇ ದಂತಕಥೆಯಾಗಿಬಿಟ್ಟಿರುವ ಸರ್ ಕೆನ್ ರಾಬಿನ್ ಸನ್ ರವರ 2006ರ TED ಭಾಷಣದ ಅನುಪಾಲನಾ ಭಾಷಣ. ತೀಕ್ಷ್ಣವಾಗಿಯೂ ಹಾಸ್ಯಭರಿತವಾಗಿಯೂ ಇರುವ ಇದರಲ್ಲಿ ರಾಬಿನ್ಸನ್ ರವರು ಶಿಕ್ಷಣವು ಶ್ರೇಣೀಬದ್ಧ ಶಾಲೆಗಳಿಂದ ವೈಯಕ್ತಿಕ ಕಲಿಕೆಯೆಡೆಗೆ ಕ್ರಾಂತಿಕಾರಕ ರೂಪಾಂತರವಾಗಬೇಕೆಂದೂ , ಮಕ್ಕಳ ಸಹಜ ಪ್ರತಿಭೆಗಳು ಅರಳುವಂತಹ ವಾತಾವರಣವನ್ನು ನಾವು ನಿರ್ಮಿಸಬೇಕೆಂದೂ ಬಲವಾಗಿ ಪ್ರತಿಪಾದಿಸಿದ್ದಾರೆ.

ಪ್ರಣವ್ ಮಿಸ್ತ್ರಿ: ಆರನೆಯ ಇಂದ್ರಿಯ ತಂತ್ರಜ್ಞಾನದ ಜನಕ

TEDIndia 2009

ಪ್ರಣವ್ ಮಿಸ್ತ್ರಿ: ಆರನೆಯ ಇಂದ್ರಿಯ ತಂತ್ರಜ್ಞಾನದ ಜನಕ
18,689,186 views

TED ಭಾರತ ಮೈಸೂರಿನಲ್ಲಿ ನಡೆಸಿದ ಆರನೆಯ ಇಂದ್ರಿಯದ ಬಗೆಗಿನ ಪ್ರಣವ್ ಮಿಸ್ಟ್ರಿಯವರೊಂದಿಗಿನ ಮಾತುಕತೆ ಭೌತಿಕ ವಿಶ್ವ ಹಾಗೂ ಯಾಂತ್ರಿಕ ವಿಶ್ವದೊಂದಿಗಿನ ಸಂವಹನ ಹಾಗೂ ಸಂಗಣಕದೊಂದಿಗೆ ವರ್ತನೆಯ ಕುರಿತು ತಿಳಿಸುತ್ತದೆ. ಇದರಲ್ಲಿ ಪ್ರಣವ್ ಈ ತಂತ್ರಜ್ಞಾನವನ್ನು ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಮುಕ್ತ ತಂತ್ರಾಂಶವಾಗಿಸುವ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

Marc Koska: ಚುಚ್ಚುಕೊಳವೆ(syringe)ಯನ್ನು ಮರು-ಕಂಡುಹಿಡಿಯಲು ೧೩ ಲಕ್ಷ ಕಾರಣಗಳು

TEDGlobal 2009

Marc Koska: ಚುಚ್ಚುಕೊಳವೆ(syringe)ಯನ್ನು ಮರು-ಕಂಡುಹಿಡಿಯಲು ೧೩ ಲಕ್ಷ ಕಾರಣಗಳು
698,306 views

ಸಣ್ಣ ಸಣ್ಣ ಆಸ್ಪತ್ರೆಯಲ್ಲಿ ಚುಚ್ಚುಕೊಳವೆ(syringe)ಗಳ ಮರುಬಳಕೆ ಮಾಡುವುದರಿಂದ ಪ್ರತೀ ವರ್ಷ ಸುಮಾರು ೧೩ ಲಕ್ಷ ಜನರು ಸಾಯುತ್ತಿದ್ದಾರೆ. ಮಾರ್ಕ್ ಕೋಸ್ಕ ರವರು ಜಗತ್ತಿನ ಈ ಸಮಸ್ಯೆಯ ಬಗ್ಗೆ ಭಾವಚಿತ್ರಗಳನ್ನು ಮತ್ತು ಗುಪ್ತ ಕ್ಯಾಮೆರಾದ ಸಹಾಯದೊಂದಿಗೆ ವಿವರಣೆ ನೀಡಿದ್ದಾರೆ. ಹಾಗೆಯೇ ಅವರು ಈ ಸಮಸ್ಯೆಗೆ ಪರಿಹಾರ ತಿಳಿಸಿದ್ದಾರೆ : ಅದು ಎರಡನೇ ಬಾರಿಗೆ ಉಪಯೋಗಿಸಲಾಗದ ಕಡಿಮೆ ಬೆಲೆಯ ಸಿರೀಂಜ್.

ಆರ್ಥರ್ ಬೆಂಜಮಿನ್ ರವರ ಗಣಿತ ಶಿಕ್ಷಣವನ್ನು ಬದಲಾಯಿಸುವ ಸೂತ್ರ

TED2009

ಆರ್ಥರ್ ಬೆಂಜಮಿನ್ ರವರ ಗಣಿತ ಶಿಕ್ಷಣವನ್ನು ಬದಲಾಯಿಸುವ ಸೂತ್ರ
2,625,810 views

ಯಾರೋ ಒಬ್ಬ ಗಣಿತ ಶಿಕ್ಷಕನನ್ನು ಕೇಳುತ್ತಾನೆ,"ನಾನು ನಿಜ ಜೀವನದಲ್ಲಿ ಗಣಿತಶಾಸ್ತ್ರವನ್ನು ಬಳಸುತ್ತೇನೆಯೇ?" ಇದಕ್ಕೆ ನಮ್ಮಲ್ಲಿ ಹೆಚ್ಚಿನವರಿಗೆ ಉತ್ತರ "ಇಲ್ಲ" ಎಂದು ಅರ್ಥರ್ ಬೆಂಜಮಿನ್ ಹೇಳುತ್ತಾರೆ. ಅವರು ಈ ಡಿಜಿಟಲ್ ಯುಗದಲ್ಲಿ ಗಣಿತ ಶಿಕ್ಷಣವನ್ನು ಹೇಗೆ ಪ್ರಸ್ತುತಗೊಳಿಸುವುದು ಎಂಬುದರ ಬಗ್ಗೆ ಒಂದು ಆತ್ಮವಿಶ್ವಾಸದ ಪ್ರಸ್ತಾಪವನ್ನು ಮುಂದಿಡುತ್ತಾರೆ.

ಇತ್ತೀಚಿನ ಹವಮಾನದಲ್ಲಿ ಆಗುತಿರುವ ಬದಲಾವಣೆಗಳ ಬಗ್ಗೆ ಅಲ್ ಗೊರ್ ರ ಎಚ್ಚರಿಕೆ.

TED2009

ಇತ್ತೀಚಿನ ಹವಮಾನದಲ್ಲಿ ಆಗುತಿರುವ ಬದಲಾವಣೆಗಳ ಬಗ್ಗೆ ಅಲ್ ಗೊರ್ ರ ಎಚ್ಚರಿಕೆ.
952,886 views

ಟೆಡ್ ೨೦೦೯ರಲ್ಲಿ, ಪ್ರಪಂಚಾದ್ಯಂತ ಸಂಗ್ರಹಿಸಿದ ಸ್ಲ್ಯೆಡ್ಸ್ ಗಳಲ್ಲಿ ಹವಮಾನ ಬದಲಾವಣೆಯ ಬಗ್ಗೆ ಇರುವ ತೊಂದರೆಗಳು ವಿಜ್ಞಾನಿಗಳ ವರದಿಗಿಂತ ಗಂಭೀರವಾಗಿದೆ ಎಂದು ತೋರಿಸಿಕೊಟ್ಟಿದ್ದಾರೆ ಮತ್ತು ಶುದ್ದ ಕಲ್ಲಿದ್ದಲ ಬಗ್ಗೆ ಒತ್ತುಕೊಟ್ಟಿದ್ದಾರೆ.

ರಾಬರ್ಟ್ ಲ್ಯಾಂಗ್: ಓರಿಗಾಮಿಯ ಮೋಡಿ ಮತ್ತು ಗಣಿತ

TED2008

ರಾಬರ್ಟ್ ಲ್ಯಾಂಗ್: ಓರಿಗಾಮಿಯ ಮೋಡಿ ಮತ್ತು ಗಣಿತ
2,647,209 views

ಓರಿಗಾಮಿ ತಜ್ಞರ ಮುಂಚೂಣಿಯಲ್ಲಿರುವ ರಾಬರ್ಟ್ ಲ್ಯಾಂಗ್ ಅವರು "ಓರಿಗಾಮಿಯ ಮೋಡಿ ಮತ್ತು ಗಣಿತ" ಎಂಬ ವಿಷಯವಾಗಿ ನೀಡಿರುವ “ಟೆಡ್” ಉಪನ್ಯಾಸವಿದು. ಈ ಉಪನ್ಯಾಸವು, ಒಂದು ಸಾಂಪ್ರದಾಯಿಕ ಕಲೆಯಾಗಿದ್ದ ಓರಿಗಾಮಿಯ ಸ್ವರೂಪ ಇಂದು ಹೇಗೆ ಸಂಪೂರ್ಣವಾಗಿ ಪರಿವರ್ತನೆಗೊಂಡಿದೆ ಹಾಗು ಈ ಪರಿವರ್ತನೆಗೆ ಕಾರಣೀಭೂತವಾದ ಗಣಿತಶಾಸ್ತ್ರದ ಪಾತ್ರ ಏನು ಎಂಬುದನ್ನು ರೋಚಕವಾಗಿ ಪರಿಚಯಿಸುತ್ತದೆ. ರಾಬರ್ಟ್ ಲ್ಯಾಂಗ್ ಅವರು ಆಧುನಿಕ ಓರಿಗಾಮಿಯ ನಾಲ್ಕು ಸರಳ ನಿಯಮಗಳನ್ನು ಸಂಕ್ಷೇಪವಾಗಿ ತಿಳಿಸುತ್ತಾ, ಈ ಕೆಲವು ವರ್ಷಗಳಿಂದ ಓರಿಗಾಮಿಯು ಸಾಧಿಸಿರುವ ಕೆಲವು ಸಂಕೀರ್ಣ ಸಂಗತಿಗಳನ್ನು ಶ್ರೋತೃಗಳ ಮುಂದೆ ಎಳೆ-ಎಳೆಯಾಗಿ ತೆರೆದಿಡುತ್ತಾರೆ. ಓರಿಗಾಮಿಯ ತಂತ್ರಗಳು ವಾಸ್ತವ ಜಗತ್ತಿನಲ್ಲಿ ಪ್ರಸ್ತುತ ಬಳಕೆಯಾಗುತ್ತಿರುವ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಖಗೋಳಶಾಸ್ತ್ರ, ವೈದ್ಯಕೀಯಶಾಸ್ತ್ರ ಹಾಗು ಮೋಟಾರ್ ವಾಹನವಿನ್ಯಾಸ ಶಾಸ್ತ್ರಗಳಂತಹ ವಿವಿಧ ಕ್ಷೇತ್ರಗಳಲ್ಲಿ ತಂತ್ರಜ್ಞರು ಎದುರಿಸುವ ಅನೇಕ ಸವಾಲುಗಳನ್ನು ಪರಿಹರಿಸುವಲ್ಲಿ ಓರಿಗಾಮಿ ತಜ್ಞರು ಹೇಗೆ ಸಫಲರಾಗಿದ್ದಾರೆ ಎಂಬುದನ್ನು ಮನಗಾಣಿಸುತ್ತಾ ಉಪನ್ಯಾಸವನ್ನು ಮುಗಿಸುತ್ತಾರೆ.

ಅಲ್ ಗೋರ್: ವಾತಾವರಣದ ಬಿಕ್ಕಟ್ಟಿನ ಮೇಲೆ ಹೊಸ ಯೋಚನೆ

TED2008

ಅಲ್ ಗೋರ್: ವಾತಾವರಣದ ಬಿಕ್ಕಟ್ಟಿನ ಮೇಲೆ ಹೊಸ ಯೋಚನೆ
2,169,877 views

ಭಾವನಾತ್ಮಕವಾದ ಭಾಷಣದಲ್ಲಿ, ಮೆಕ್‌ಅರ್ಥರ್ ಪುರಸ್ಕಾರ ವಿಜೇತ ಹೋರಾಟಗಾರ್ತಿ ಮೆಜೋರಾ ಕಾರ್ಟೆರ್ ಪರಿಸರ ನ್ಯಾಯಕ್ಕಾಗಿ ಸೌತ್ ಬ್ರಾಂಕ್ಸ್‌ನಲ್ಲಿ ಆಕೆ ನಡೆಸಿದ ಹೋರಾಟದ ವಿವರ ನೀಡುತ್ತಾರೆ ಮತ್ತು ಹೇಗೆ ಅಲ್ಪಸಂಖ್ಯಾತ ಆಯಕಟ್ಟಿನ ಪ್ರದೇಶಗಳು ನಗರ ನಿರ್ಮಾಣ ಯೋಜನೆಯ ಹುಳುಕುಗಳಿಂದಾಗಿ ತೊಂದರೆ ಅನುಭವಿಸುತ್ತಿವೆ ಎಂಬ ವಿವರಗಳನ್ನು ನೀಡುತ್ತಾರೆ.

ಆರ್ಥರ್ ಬೆಂಜಮಿನ್ ಮಾಡುವ "ಮ್ಯಾಜಿಕ್ ಗಣಿತ"

TED2005

ಆರ್ಥರ್ ಬೆಂಜಮಿನ್ ಮಾಡುವ "ಮ್ಯಾಜಿಕ್ ಗಣಿತ"
9,599,588 views

ಈ ಸ್ವಾರಸ್ಯವಾದ ಪ್ರದರ್ಶನದಲ್ಲಿ, ಆರ್ಥರ್ ಬೆಂಜಮಿನ್ ಕ್ಯಾಲುಕೇಟರ್‍ಗಳ ತಂಡಕ್ಕಿಂತ ವೇಗವಾಗಿ 3-ಅಂಕಿ ಸಂಖ್ಯೆಯ ವರ್ಗವನ್ನು ಕಂಡುಹಿಡಿಯುತ್ತಾರೆ, ಮತ್ತೊಂದು ದೊಡ್ಡ ಮಾನಸಿಕ ಸೂತ್ರವನ್ನು ಬಿಡಿಸುತ್ತಾರೆ ಮತ್ತು ಕೆಲವು ಹುಟ್ಟಿದ ದಿನಗಳನ್ನು ಊಹಿಸುತ್ತಾರೆ. ಅವರು ಅದನ್ನು ಹೇಗೆ ಮಾಡುತ್ತಾರೆ? ಅವರೇ ನಿಮಗೆ ತಿಳಿಸುತ್ತಾರೆ.

ಬ್ಲೇಸ್ ಅಗ್ವೆರಾ ವೈ ಅರ್ಕಾಸ್‌ರ ಡೆಮೋಸ್ ಫೊಟೊಸಿಂತ್

TED2007

ಬ್ಲೇಸ್ ಅಗ್ವೆರಾ ವೈ ಅರ್ಕಾಸ್‌ರ ಡೆಮೋಸ್ ಫೊಟೊಸಿಂತ್
5,831,957 views

ನಾವು ಡಿಜಿಟಲ್ ಇಮೇಜ್‌ಗಳ ಕಡೆ ನಾವು ನೋಡುವ ವಿಧಾನವನ್ನು ಪರಿವರ್ತಿಸಬಲ್ಲ ಫೊಟೊಸಿಂತ್‌ನ ಪ್ರಭಾವೀ ಡೆಮೊವನ್ನು ಬ್ಲೇಸ್ ಅಗ್ವೆರಾ ವೈ ಅರ್ಕಾಸ್ ತೋರಿಸುತ್ತಿದ್ದಾರೆ. ವೆಬ್‌ನಿಂದ ಪಡೆದ ಸ್ಟಿಲ್‌ ಫೋಟೊಗಳನ್ನು ಬಳಸಿ ಫೋಟೊಸಿಂತ್ ಸುಂದರ ಕನಸಿನ ತಾಣಗಳನ್ನು ಸೃಷ್ಟಿಸುತ್ತದೆ ಮತ್ತು ನಾವು ಅಲ್ಲಿ ನೆವಿಗೇಟ್‌ ಮಾಡಬಹುದು.

ಆಫ್ರಿಕಾದಲ್ಲಿ ವಹಿವಾಟು ನಡೆಸುವ ಬಗ್ಗೆ ಎನ್‌ಗೋಜಿ ಒಕೊಂಜೊ-ಇವಿಯಾಲ

TED2007

ಆಫ್ರಿಕಾದಲ್ಲಿ ವಹಿವಾಟು ನಡೆಸುವ ಬಗ್ಗೆ ಎನ್‌ಗೋಜಿ ಒಕೊಂಜೊ-ಇವಿಯಾಲ
1,351,670 views

ನಾವು ಬರಗಾಲ ಮತ್ತು ರೋಗ, ಘರ್ಷಣೆ ಮತ್ತು ಭ್ರಷ್ಟಾಚಾರವನ್ನುಳ್ಳ ಆಫ್ರಿಕಾದ ನೆಗೆಟಿವ್ ಇಮೇಜ್‌ಗಳನ್ನು ಹೊಂದಿದ್ದೇವೆ. ಆದರೆ, ಎನ್‌ಗೋಜಿ ಒಕೊಂಜೊ-ಇವಿಯಾಲ ಸುಧಾರಣೆ, ಆರ್ಥಿಕ ಪ್ರಗತಿ ಹಾಗೂ ಔದ್ಯಮಿಕ ಅವಕಾಶಗಳ ಇನ್ನೊಂದು, ಯಾರೂ ಹೇಳದ ವಿದ್ಯಮಾನವೊಂದು ಆಫ್ರಿಕಾದ ದೇಶಗಳಲ್ಲಿ ನಡೆಯುತ್ತಿರುವುದನ್ನು ಹೇಳುತ್ತಾರೆ.

ನೀವೆಂದೂ ಕಾಣದ ಅತ್ಯುತ್ತಮ ಅಂಕಿಸಂಖ್ಯೆಗಳನ್ನು ಹ್ಯಾನ್ಸ್ ರೋಸ್ಲಿಂಗ್ ತೋರಿಸುತ್ತಿದ್ದಾರೆ.

TED2006

ನೀವೆಂದೂ ಕಾಣದ ಅತ್ಯುತ್ತಮ ಅಂಕಿಸಂಖ್ಯೆಗಳನ್ನು ಹ್ಯಾನ್ಸ್ ರೋಸ್ಲಿಂಗ್ ತೋರಿಸುತ್ತಿದ್ದಾರೆ.
14,386,844 views

ಈ ರೀತಿ ಪ್ರಸ್ತುತಪಡಿಸಿದ ಡಾಟಾವನ್ನು ನೀವು ಹಿಂದೆಂದೂ ಕಂಡಿರಲಿಕ್ಕಿಲ್ಲ. ಸ್ಪೊರ್ಟ್ ಕಾಸ್ಟರ್‌ನ ನಾಟಕ ಮತ್ತು ತುರ್ತಿನಿಂದ ಸಂಖ್ಯಾಶಾಸ್ತ್ರ ಗುರು ಹ್ಯಾನ್ಸ್ ರೋಸ್ಲಿಂಗ್ ತಥಾಕಥಿತ "ಅಭಿವೃದ್ಧಿಶೀಲ ಪ್ರಪಂಚ"ದ ಬಗ್ಗೆ ಇರುವ ಭ್ರಮೆಗಳನ್ನು ಹೋಗಲಾಡಿಸಿದ್ದಾರೆ.

ಅಳಿದುಹೋದ ಸಂಸ್ಕೃತಿಯ ಬಗ್ಗೆ ವೇಡ್‌ ಡೆವಿಸ್‌

TED2003

ಅಳಿದುಹೋದ ಸಂಸ್ಕೃತಿಯ ಬಗ್ಗೆ ವೇಡ್‌ ಡೆವಿಸ್‌
4,012,783 views

ಅಚ್ಚರಿಯ ಫೋಟೊಗಳು ಮತ್ತು ಕಥನಗಳೊಂದಿಗೆ ನ್ಯಾಷನಲ್ ಜಿಯೋಗ್ರಾಫಿಕ್‌ನ ಸಾಹಸಿ ವೇಡ್ ಡೆವಿಸ್, ಆತಂಕಕಾರಿ ರೀತಿಯಲ್ಲಿ ಅಳಿದುಹೋಗುತ್ತಿರುವ ವಿಶ್ವದ ಮೂಲನಿವಾಸಿಗಳ ಸಂಸ್ಕೃತಿಗಳ ಅತಿವಿಶಿಷ್ಟ ವೈವಿಧ್ಯತೆಯನ್ನು ಮುಂದಿಟ್ಟಿದ್ದಾರೆ.

ಶಾಲೆಗಳು ಕ್ರಿಯಾತ್ಮಕತೆಯನ್ನು ಕೊಲ್ಲುತ್ತವೆ ಎನ್ನುತ್ತಾರೆ ಕೆನ್ ರಾಬಿನ್ಸನ್

TED2006

ಶಾಲೆಗಳು ಕ್ರಿಯಾತ್ಮಕತೆಯನ್ನು ಕೊಲ್ಲುತ್ತವೆ ಎನ್ನುತ್ತಾರೆ ಕೆನ್ ರಾಬಿನ್ಸನ್
64,284,825 views

ಕ್ರಿಯಾತ್ಮಕತೆಯನ್ನು ಪೋಷಿಸುವ (ಕುಂಟಿತ ಗೊಳಿಸದ) ಶೈಕ್ಷಣಿಕ ಪದ್ದತಿಯ ರಚನೆ ಆಗಬೇಕೆನ್ನುವ ವಿಚಾರವನ್ನು ಬಹಳ ಮನೋಹರವಾಗಿಯೂ ಹಾಗು ಪ್ರಬುದ್ಧವಾಗಿಯೂ ಸರ್ ಕೆನ್ ರಾಬಿನ್ಸನ್ ಅವರು ಪ್ರಸ್ತಾಪಿಸುತ್ತಾರೆ.

ಮೆಜೋರಾ ಕಾರ್ಟೆರ್‌ರ ನಗರ ಮರುನಿರ್ಮಾಣದ ಕಥನ

TED2006

ಮೆಜೋರಾ ಕಾರ್ಟೆರ್‌ರ ನಗರ ಮರುನಿರ್ಮಾಣದ ಕಥನ
2,626,277 views

ಭಾವನಾತ್ಮಕವಾದ ಭಾಷಣದಲ್ಲಿ, ಮೆಕ್‌ಅರ್ಥರ್ ಪುರಸ್ಕಾರ ವಿಜೇತ ಹೋರಾಟಗಾರ್ತಿ ಮೆಜೋರಾ ಕಾರ್ಟೆರ್ ಪರಿಸರ ನ್ಯಾಯಕ್ಕಾಗಿ ಸೌತ್ ಬ್ರಾಂಕ್ಸ್‌ನಲ್ಲಿ ಆಕೆ ನಡೆಸಿದ ಹೋರಾಟದ ವಿವರ ನೀಡುತ್ತಾರೆ ಮತ್ತು ಹೇಗೆ ಅಲ್ಪಸಂಖ್ಯಾತ ಆಯಕಟ್ಟಿನ ಪ್ರದೇಶಗಳು ನಗರ ನಿರ್ಮಾಣ ಯೋಜನೆಯ ಹುಳುಕುಗಳಿಂದಾಗಿ ತೊಂದರೆ ಅನುಭವಿಸುತ್ತಿವೆ ಎಂಬ ವಿವರಗಳನ್ನು ನೀಡುತ್ತಾರೆ.